" /> ಅವಲೋಕನ |

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್)

ಕರ್ನಾಟಕ ಸರ್ಕಾರದ ಸಂಸ್ಥೆ

ಅವಲೋಕನ

ಭಾರತದಲ್ಲಿ ಟೆಕ್ಸಾಕ್ ವಿಶ್ವಾಸಾರ್ಹ ಸಲಹಾ ಸೇವೆಗಳನ್ನು ಒದಗಿಸಲು ಕರ್ನಾಟಕ ಸರ್ಕಾರ ಪ್ರಾಯೋಜಿಸಿದ ವಿವಿಧ ಪರಿಣತರ ವ್ಯವಸ್ಥಾಪನಾ ಸಲಹೆ ಸಂಸ್ಥೆ. ಟೆಕ್ಸಾಕ್ ಸೇವೆಗಳು ವ್ಯಾಪಕ ಪರಿಣತಿ ಮತ್ತು ಪ್ರಾವೀಣ್ಯತೆಯನ್ನು ಹೊಂದಿದೆ.ಸೇವೆಗಳ ಪ್ಯಾಕೇಜ್, ಕಾರ್ಯಸಾಧ್ಯತೆಯ ಅಧ್ಯಯನ, ಮಾರುಕಟ್ಟೆ ಸಂಶೋಧನೆ, ಸ್ವತ್ತುಗಳ ಮೌಲ್ಯನಿರ್ಣಯ, ಪರಿಸರ ಪರಿಣಾಮ ಅಧ್ಯಯನಗಳನ್ನು, ಶಕ್ತಿ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ, ಕಾರ್ಪೊರೇಟ್ ಯೋಜನೆ, ಮರುಸಂಘಟನೆ ಮತ್ತು ಉದ್ಯಮಗಳ ಪುನರ್ರಚನೆ, ಮಾನವ ಶಕ್ತಿ ಯೋಜನೆ, ಬಜೆಟ್ ನಿಯಂತ್ರಣ ವ್ಯವಸ್ಥೆಗಳು, ವಿಲೀನಗಳು ಮತ್ತು ಸ್ವಾಧೀನಗಳು, ಹೂಡಿಕೆ ಅವಕಾಶಗಳನ್ನು ನಿರ್ವಹಣಾ ಅಧ್ಯಯನಗಳನ್ನು ಒಳಗೊಂಡಿದೆ, ತಂತ್ರಜ್ಞಾನ ವರ್ಗಾವಣೆ, ರೋಗನಿರ್ಣಯದ ಅಧ್ಯಯನ ಮತ್ತು ವಿನ್ಯಾಸ ಮತ್ತು ಸಂಬಂಧಿತ ಎಲ್ಲಾ ಕ್ಷೇತ್ರಗಳಲ್ಲಿ  ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸುವ ಕಾರ್ಯವನ್ನು ಟೆಕ್ಸಾಕ್  ಕೈಗೊಳ್ಳುತ್ತಿದೆ.

ಟೆಕ್ಸಾಕ್ ಕರ್ನಾಟಕ ಸರ್ಕಾರ ಮತ್ತು ಸರ್ಕಾರದ ಇತರ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಹಣಕಾಸು ಸಂಸ್ಥೆಗಳು, ವಾಣಿಜ್ಯ ಬ್ಯಾಂಕುಗಳು, ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕಿನಿಂದ ನೋಡಲ್ ಏಜೆನ್ಸಿಯಾಗಿ  ಪರಿಗಣಿಸಲ್ಪಟ್ಟಿದೆ.

ಪರಿಣತಿಯ ಆಗರ

ಟೆಕ್ಸಾಕ್ ವಿವಿಧ ಪರಿಣತರನ್ನು ಹೊಂದಿರುವ ಸಂಸ್ಥೆಯಾಗಿದೆ.ಅಲ್ಲದೆ, ಇತರ ಪ್ರಸಿದ್ಧ ಪರಿಣತ ಸಂಸ್ಥೆಯ ಸಹಯೋಗವನ್ನು ಹೊಂದಿರುತ್ತದೆ.