" /> ಕೈಗಾರಿಕಾ ನೀತಿ 2014-19ರ ಮಧ್ಯಂತರ ಮೌಲ್ಯಮಾಪನ |

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್)

ಕರ್ನಾಟಕ ಸರ್ಕಾರದ ಸಂಸ್ಥೆ

Project Description

ಕರ್ನಾಟಕ ಸರ್ಕಾರವು ಅಕ್ಟೋಬರ್ 2014ರಿಂದ ಜಾರಿಗೆ ಬರುವಂತೆ ಕೈಗಾರಿಕಾ ನೀತಿ 2014-19 ನ್ನು ಪ್ರಕಟಿಸಿದೆ. ವಾರ್ಷಿಕ ಶೇ.12ರ ಕೈಗಾರಿಕಾ ಬೆಳವಣಿಗೆಯನ್ನು ಇರಿಸಿಕೊಳ್ಳುವುದು ಹಾಗೂ ರಾಜ್ಯದ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ವಂತಿಗೆಯನ್ನು ನೀತಿಯವಧಿಯಲ್ಲಿ ಶೇ.20ಕ್ಕೆ ಏರಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ. ಅಲ್ಲದೆ, ರೂ.5 ಲಕ್ಷ ಕೋಟಿಗಳ ಬಂಡವಾಳವನ್ನು ರಾಜ್ಯಕ್ಕೆ ಆಕರ್ಷಿಸುವುದು ಮತ್ತು 15 ಲಕ್ಷ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಠಿಸುವುದು ಈ ನೀತಿಯ ಗುರಿಯಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಈ ನೀತಿಯ ಮಧ್ಯಂತರ ಮೌಲ್ಯಮಾಪನವನ್ನು ಮಾಡುವ ಕಾರ್ಯನಿಯೋಜನೆಯನ್ನು ಟೆಕ್ಸಾಕಿಗೆ ವಹಿಸಿದ್ದು, ಈ ವರದಿಯು ನೀತಿಯ ಕಾರ್ಯಾನುಷ್ಠಾನದಲ್ಲಿ ಆಗಿರುವ ಪ್ರಗತಿ ಮತ್ತು ನೀತಿಯಲ್ಲಿರಿಸಿಕೊಂಡಿರುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಕಂಡುಹಿಡಿಯಲು ಸಹಕಾರಿಯಾಗಿದೆ.

Project Details